ಕಲಬುರಗಿ : ಕಲಬುರಗಿ ಜಿಲ್ಲೆಯಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆಯಾಗ್ತಿದ್ದು, ಚಿಂಚೋಳಿ ತಾಲೂಕಿನಲ್ಲಿ ಕಳೆದ ರಾತ್ರಿವಿಡಿ ಸುರಿದ ಮಳೆಯಿಂದಾಗಿ ಅನೇಕ ರಸ್ತೆಗಳು, ಸೇತುವೆಗಳು, ಸಾವಿರಾರು ಹೆಕ್ಟೇರ್ ಸೇತುವೆಗಳು ಜಲಾವೃತವಾದ ಘಟನೆ ನಡೆದಿದ್ದು, ಸೆ20 ರಂದು ಬೆಳಗ್ಗೆ 8.30 ಕ್ಕೆ ಮಾಹಿತಿ ಲಭ್ಯವಾಗಿದೆ.. ಮುಲ್ಲಾಮಾರಿ ಜಲಾಶಯದಿಂದ 1900 ಕ್ಯೂಸೆಕ್ ನೀರು ಬಿಟ್ಟು ಪರಿಣಾಮ ಚಿಂಚೋಳಿ ತಾಲೂಕಿನ ಚಿಮ್ಮನಚೋಡ್, ತಾಜಲಾಪುರ, ಕನಕಪುರ, ನಿಮಾ ಹೊಸಹಳ್ಳಿ ಸೇರಿದಂತೆ ವಿವಿಧೆಡೆ ಸೇತುವೆಗಳು, ರಸ್ತೆಗಳು ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತವಾಗಿದೆ..