ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಹಣವನ್ನು ಸೊಸೆ ಅಕೌಂಟಿಗೆ ಹಾಕಬೇಕಾ ಅಥವಾ ಅತ್ತೆಯ ಅಕೌಂಟಿಗೆ ಹಾಕಬೇಕಾ ಎನ್ನುವ ಗೊಂದಲ ಮೊದಲು ಸೃಷ್ಟಿಯಾಗಿತ್ತು. ನಂತರ ಮನೆ ಯಜಮಾನಿಗೆ ಹಣ ಹಾಕುವುದಾಗಿ ಸರ್ಕಾರ ನಿರ್ಧರಿಸಲಾಯಿತು. ಇದರಿಂದಾಗಿ ಅತ್ತೆ ಸೊಸೆಯಂದಿರ ಜಗಳ ಕೂಡ ನಡೆಯುತ್ತಿದ್ದವು. ಅಂತಹದೇ ಪ್ರಕರಣ ಗದಗದಲ್ಲಿ ನಡೆದಿದ್ದು, ಸೊಸೆಗೆ ಬರುತ್ತಿದ್ದ ಗೃಹಲಕ್ಷ್ಮಿ 20 ತಿಂಗಳ ಹಣದಲ್ಲಿ ಅರ್ಧ ಭಾಗ ಅಂದರೆ 20 ಸಾವಿರ ರೂ ಗಳನ್ನು ವಯಸ್ಸಾದ ಅತ್ತಿಗೆ ಗದಗ ಜಿಲ್ಲಾ ಗ್ಯಾರಂಟಿ ಸಮಿತಿಯಿಂದ ಕೊಡಿಸಲಾಗಿದೆ.