ನ್ಯಾಯದ ಹರಿಕಾರ ಪ್ರವಾದಿ ಪೈಗಂಬರ್ ಮೊಹಮ್ಮದ್ (ಸ) ರವರ ಸೀರತ್ ಅಭಿಯಾನ 2025, ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಇಂದಿನಿಂದ ರಾಜ್ಯ ವ್ಯಾಪಿ ಏಕಕಾಲಕ್ಕೆ ಆರಂಭಗೊಂಡಿದೆ ಎಂದು ಕರ್ನಾಟಕ ಸಾಲಿಡಾರಿಟಿ ಯೂತ್ ಮೂಮೆಂಟ್ ಕಾರ್ಯದರ್ಶಿಯಾಗಿರುವ ಇಲಿಯಾಸ್ ನಾಲ್ ಬಂದ್ ಹೇಳಿದರು, ಅವರು ಬುಧವಾರ ಮಧ್ಯಾಹ್ನ 3-30 ಗಂಟೆಗೆ ಕೊಪ್ಪಳ ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಈ ಕುರಿತು ಹೇಳಿಕೆ ನೀಡಿದ ಅವರು ಸೆ, 03 ರಿಂದ 14 ರವರೆಗೆ ರಾಜ್ಯವ್ಯಾಪಿ ಅಭಿಯಾನ ಆರಂಭಗೊಂಡಿದೆ,