ನನ್ನ ಮೇಲೆ ಕೇಸು ದಾಖಲಿಸಲು ಸರ್ಕಾರಕ್ಕೆ ಯಾವ ನೈತಿಕತೆಯಿದೆ? ಎಂದು ವಿಪಂ ಸದಸ್ಯ ಸಿ.ಟಿ.ರವಿ ಸರ್ಕಾರವನ್ನು ಪ್ರಶ್ನಿಸಿದರು. ಶನಿವಾರ ಮದ್ದೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮದ್ದೂರು ಗಣೇಶ ಮೂರ್ತಿ ವಿಸರ್ಜನ ಮೆರವಣಿಗೆ ವೇಳೆ ನಡೆದ ಗಲಭೆ ಖಂಡಿಸಿ ಕೋಮುದ್ವೇಷದ ಬಾಷಣ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ದಾಖಲಿಸಿರುವ ದೂರಿಗೆ ಅವರು ಪ್ರತಿಕ್ರಿಯಿಸಿದರು. ಮದ್ದೂರು ಗಲಭೆ ಸಂಬಂಧ ಅನ್ಯಕೋಮಿನವರು ನಡೆದಿರುವ ಘಟನೆ ಒಪ್ಪಿ ಕ್ಷಮೆಯಾಚಿಸಿದ್ದಾರೆ. ಅದನ್ನು ಬ್ಯಾಲೆನ್ಸ್ ಮಾಡಲು ನಮ್ಮ ಮೇಲೆ ಕೇಸು ಹಾಕಿದ್ದಾರೆ. ಪ್ರಚೋದನಕಾರಿ ಬಾಷಣ ಮಾಡಿದ್ದೇನೆ ಎಂದು ಕೇಸು ದಾಖಲಿಸಿದ್ದೀರಿ, ಅದನ್ನು ಅದನ್ನು ಎದುರಿಸುತ್ತೇನೆ.ಪೊಲೀಸ್ ಸ್ಟೇಷನ್'ಗೆ ಬೆಂಕಿ ಹಾಕಿದವರ ಕೇಸ್ ವಾಪಾಸ್ ಪಡೆಯಲಾಗಿದೆ ಎಂದರು.