ಹಿಂದುಳಿದ ವರ್ಗಗಳ ಆಯೋಗ ಆಗಸ್ಟ್ 22ರಂದು ಹೊರಡಿಸಿರುವ ಜಾಹೀರಾತಿನಲ್ಲಿ ದೇವಾಂಗ ಕ್ರಿಶ್ಚಿಯನ್ ಸೇರಿದಂತೆ ಹಲವು ಜಾತಿ ಹೆಸರಿನ ಮುಂದೆ ಕ್ರಿಶ್ಚಿಯನ್ ಪದ ಬಳಕೆ ಮಾಡಿರುವುದನ್ನ ವಾಪಸ್ ಪಡೆಯುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ಮಾಜಿ ಶಾಸಕ ಎಂ. ಡಿ. ಲಕ್ಷ್ಮಿ ನಾರಾಯಣ್ ಹೇಳಿದರು.ಅವರು ತುಮಕೂರಿನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಒಬಿಸಿ ಫೆಡರೇಶನ್ ಆಫ್ ಇಂಡಿಯಾ ನೇತೃತ್ವದಲ್ಲಿ ನಡೆದ ಮಾಧ್ಯಮಗೋಷ್ಠಿ, ಉದ್ದೇಶಿಸಿ ಗುರುವಾರ ಮದ್ಯಾಹ್ನ 12.30 ರ ಸಮಯದಲ್ಲಿ ಮಾತನಾಡಿದರು.ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಬದಲಾವಣೆ ಆಗಬೇಕಾದರೆ ಸಾಕಷ್ಟು ಮಾನದಂಡಗಳಿವೆ ಎಂದರು.