ಇಡೀ ದೇಶವೆ ಸಡಗರದಿಂದ ಆಚರಿಸುವ ಗೌರಿ- ಗಣೇಶ ಹಬ್ಬ ಒಂದೊಂದು ಸ್ಥಳದಲ್ಲಿ ಒಂದೊಂದು ರೀತಿ ವಿಭಿನ್ನ. ಅದೇ ರೀತಿ ಈ ಊರಲ್ಲಿ ಮಂಗಳವಾರ ಗೌರಿಹಬ್ಬ ಬಂದಿರುವುದಕ್ಕೆ ಬಾಡೂಟ ನೈವೇದ್ಯ ಇಟ್ಟು ಪೂಜಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದಲ್ಲಿ ಮಂಗಳವಾರ ಗೌರಿ ಹಬ್ಬ ಬಂದಿರುವುದಕ್ಕೆ ಕೆಲವು ಮನೆತನ ಕುರಿ, ಕೋಳಿಯ ಮಾಂಸದೂಟವನ್ನು ದೇವರಿಗೆ ಎಡೆ ಇಟ್ಟು ಮಂಗಳವಾರ ಸಹಪಂಕ್ತಿ ಭೋಜನ ಸವಿದಿದ್ದಾರೆ. ಮಂಗಳವಾರ ಗೌರಿಹಬ್ಬ ಬಂದರೇ ನಂಜುಂಡೇಶ್ವರನ ಭಕ್ತರು ಮಾಂಸದ ನೈವೇದ್ಯ ಇಡಲಿದ್ದಾರೆ. ಭಾನುವಾರ ಗೌರಿಹಬ್ಬ ಬಂದರೇ ಪಟ್ಟದರಾಣಿ ಭಕ್ತರು ಮಾಂಸದ ಎಡೆ ಇಟ್ಟು ಪೂಜಿಸುವುದು ಇಲ್ಲಿನ ಸಂಪ್ರದಾಯ.