ಹುಬ್ಬಳ್ಳಿ ನಗರದಲ್ಲಿ ರೇಡಿಯೊ ಮಿರ್ಚಿ ಆಯೋಜಿಸಿದ ಗಣೇಶ ಸಂಭ್ರಮ 2025ರ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸಿದರು. ಹುಬ್ಬಳ್ಳಿ-ಧಾರವಾಡದಲ್ಲಿ 5 ದಿನಗಳ ಕಾಲ ಗಣೇಶ ಚತುರ್ಥಿಯ ಆಚರಣೆಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಆರ್.ಜೆ ಮಾಹಿ, ಸಾಮ್ರಾಟ್ ಸಿಂಗ್, ಮಂಜುನಾಥ್ ತಿಳಿಗಲ್, ಪ್ರಾದೇಶಿಕ ವ್ಯವಸ್ಥಾಪಕರಾದ ಲೋಹಿತ್ ಚಿನ್ನಪ್ಪ ಇದ್ದರು.