ಕೂಡ್ಲಿಗಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ತಾಲೂಕಿನ ವಿವಿಧ ಗ್ರಾಮಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಆಲಿಸಿದರು. ತಾಲ್ಲೂಕಿನ ಬಡೆಲಡುಕು ಗ್ರಾಮದಲ್ಲಿ ಕುಂದುಕೊರತೆ ಕೊರತೆ ಪಾಲಿಸಿ ನಂತರ ಮಾತನಾಡಿದ ಅವರು. ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಮನೆ ನಿರ್ಮಾಣಕ್ಕೆ ಸಹಾಯಧನ ಸ್ವಯಂ ಉದ್ಯೋಗ ಯೋಜನೆ ಉದ್ಯಮಶೀಲತಾ ಯೋಜನೆ ಭೂ ಒಡೆತನ ಯೋಜನೆ ಗಂಗಾ ಕಲ್ಯಾಣ ಯೋಜನೆ ಮತ್ತು ಸ್ವಾವಲಂಬಿ ಸಾರಥಿ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ ಎಂದರು. ನಿಗಮದಿಂದ ಜಾರಿಗೆ ತರಲಾದ ವಿವಿಧ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದರು.