ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಆಗಸ್ಟ್ ೨೪ ರಂದು ಧಾರವಾಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಆಗಸ್ಟ್ ೨೪ ರಂದು ಬೆಳಿಗ್ಗೆ ೧೦ ಗಂಟೆಗೆ ಮಳೆಯಿಂದ ಹಾನಿಗೊಳಗಾದ ಗದಗ-ನರಗುಂದ ರಸ್ತೆಯ ತಡಹಾಳ ಗ್ರಾಮದ ಹತ್ತಿರ ಇರುವ ಬೆಣ್ಣೆ ಹಳ್ಳಕ್ಕೆ ಕೊಚ್ಚಿಹೋದ ಸೇತುವೆ ವೀಕ್ಷಣೆ ಮಾಡುವರು. ನಂತರ ಅಣ್ಣಿಗೇರಿ ತಾಲ್ಲೂಕಿನ ವಿವಿಧ ಕಡೆ ರಸ್ತೆ ಹಾಗೂ ಮಳೆಯಿಂದ ಹಾನಿಗೊಳಗಾದ ಬೆಳೆಹಾನಿ ವೀಕ್ಷಣೆ ಮಾಡುವರು.