ಹಳಿಯಾಳ : ನವರಾತ್ರಿಯ ಪ್ರಯುಕ್ತ ಹಳಿಯಾಳ ಪಟ್ಟಣದಲ್ಲಿ 9 ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ದುರ್ಗಾದೌಡ್ ಧಾರ್ಮಿಕ ಕಾರ್ಯಕ್ರಮ ಇಂದು ಸೋಮವಾರ 8 ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಸೋಮವಾರ ಬೆಳಗ್ಗೆ 7.00 ಗಂಟೆ ಸುಮಾರಿಗೆ ದುರ್ಗಾದೌಡ್ ನಡಿಗೆ ಪಟ್ಟಣದ ಶ್ರೀ ತುಳಜಾಭವಾನಿ ದೇವಾಸ್ಥಾನಕ್ಕೆ ಆಗಮಿಸಿದ ಸಂಧರ್ಭದಲ್ಲಿ ಶಾಸಕ ಆರ್.ವಿ.ದೇಶಪಾಂಡೆಯವರು ಭಕ್ತಿಪೂರ್ವಕ ಸ್ವಾಗತ ಕೋರಿದರು. ನಂತರ ಭಗವಾಧ್ವಜಕ್ಕೆ ಧರ್ಮಪತ್ನಿ ರಾಧಾ ಆರ್ ದೇಶಪಾಂಡೆಯವರೊಂದಿಗೆ ಆರ್.ವಿ.ದೇಶಪಾಂಡೆಯವರು ಪೂಜೆಯನ್ನು ಸಲ್ಲಿಸಿ ಆದರದಿಂದ ಬರಮಾಡಿಕೊಂಡರು.