ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ರೈತ ಅಮರಯ್ಯ ಸ್ವಾಮಿ, ತಮ್ಮ ಜಮೀನಿನಲ್ಲಿ ಬೆಳೆದಿರುವ ಹತ್ತಿ ಬೆಳೆಗೆ ಕ್ರಿಮಿನಾಶಕ ಸಿಂಪಡಿಸಲು ಗುರುವಾರ ಮಧ್ಯಾಹ್ನ ಡ್ರೋಣ್ ಬಳಕೆ ಮಾಡಿದ್ದು ಇದನ್ನು ವೀಕ್ಷಿಸಲು ರೈತರು ಆಗಮಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಗುರುವಾರ ಮಧ್ಯಾಹ್ನ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪಡಿಸುತ್ತಿದ್ದರೆ ಇದೇ ಮೊದಲ ಬಾರಿ ಡ್ರೋಣ್ ಬಳಕೆ ಮಾಡಿರುವುದರಿಂದ ರೈತರು ಬೆರಗುಗಣ್ಣಿನಿಂದ ವೀಕ್ಷಿಸಿದರು. ಡ್ರೋಣ್ ಬಳಕೆ ಮಾಡುವುದರಿಂದ ಆರೋಗ್ಯ ಹಾಗೂ ಸಮಯದ ಉಳಿತಾಯ ಆಗುವುದಲ್ಲದೆ ಬೆಳೆಗಳಿಗೆ ಸರಿಯಾಗಿ ಸಿಂಪಡಣೆ ಆಗಲಿದೆ ಎಂದು ರೈತ ಅಮರಯ್ಯ ತಿಳಿಸಿದರು.