ಸಾಮಾಜಿಕ ಸುಧಾರಣೆಯ ಸಂತ, ಜಾತಿ ತಾರತಮ್ಯ ಬದಿಗೊತ್ತಿ, ದೀನ ದಲಿತರಿಗೆ ಊರುಗೋಲಾಗಿ ಸಾಮಾಜಿಕ ಕ್ರಾಂತಿ ಹುಟ್ಟುಹಾಕಿದ ಧೀಮಂತ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜಯಂತಿ ಅಂಗವಾಗಿ ರಾಯಚೂರು ನಗರದಲ್ಲಿ ಅವರ ಭಾವಚಿತ್ರ ಮೆರವಣಿಗೆ ಸಡಗರ ಸಂಭ್ರಮದಿಂದ ರವಿವಾರ ನಡೆಯಿತು. ನಗರದ ಪ್ರಮುಖ ವೃತ್ತಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಕಲಾತಂಡಗಳು ಅದ್ಭುತ ಪ್ರದರ್ಶನ ನೀಡಿದವು. ಆದರೆ ಮೆರವಣಿಗೆಯಲ್ಲಿ ಹಗಲುವೇಷ, ಡೊಳ್ಳು ಕುಣಿತಕ್ಕಿಂತ ಜನರು ಡಿಜೆ ಹಾಡಿಗೆ ಕುಣಿಯುತ್ತಿದ್ದ ಮಂಗಳಮುಖಿಯರನ್ನು ನೋಡಲು ಮುಗಿಬಿದ್ದಿರುವ ದೃಶ್ಯ ಕಂಡುಬಂದಿತು.