ಸಾಲಬಾಧೆ ತಾಳಲಾರದೇ ರೈತರೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಳಗೊಂಡ ಗ್ರಾಮದಲ್ಲಿ ಸಂಭವಿಸಿದೆ. ಬ್ಯಾಡಗಿ ತಾಲೂಕು ತಿಪಲಾಪುರ ಗ್ರಾಮದ ಹನುಮಂತಪ್ಪ ಪುಟ್ಟಪ್ಪ ಕೂಸಮ್ಮನವರ (55) ಮೃತ ದುರ್ದೈವಿ. ಇವರು ವಿವಿಧ ಬ್ಯಾಂಕ್ ಹಾಗೂ ಖಾಸಗಿ ಪೈನಾನ್ಸ್ ಗಳಲ್ಲಿ ಕೃಷಿ ಕೆಲಸಕ್ಕೆಂದು 6.60 ಲಕ್ಷ ಸಾಲ ಮಾಡಿಕೊಂಡಿದ್ದರು. ಮಾಡಿದ ಸಾಲವನ್ನು ತೀರಿಸಲಾಗದೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ