ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರ ಪಟ್ಟಣದ ಪುರಸಭೆ ಬಳಿಯಲ್ಲಿನ ಮುಖ್ಯ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಬೈಕ್ ಮತ್ತು ಆಟೋ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಶಾಂತಪುರ ಕ್ರಾಸ್ ಕಡೆಯಿಂದ ಕಕ್ಕೇರ ಪಟ್ಟಣದ ಕಡೆಗೆ ಹೋಗುತ್ತಿದ್ದ ನಿಂಗಾಪುರ ಬಳಿಯ ಪುಟ್ಟೆರದೊಡ್ಡಿ ಗ್ರಾಮದ ಯಮನಪ್ಪ ಎನ್ನುವ 30 ವರ್ಷದ ಯುವಕ ಬೈಕ್ ಮೇಲೆ ಹೋಗುತ್ತಿರುವಾಗ ಕಕ್ಕೇರ ಕಡೆಯಿಂದ ಹೊರಟಿದ್ದ ಆಟೋ ಮಧ್ಯೆ ಅಪಘಾತ ಸಂಭವಿಸಿದ್ದರಿಂದ ಬೈಕ್ ಸವಾರ ಯಮನಪ್ಪ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ.ಆಟೋ ಚಾಲಕ ತಿರುಪತಿ ಹುಣಸಿಹೊಳೆ ಎನ್ನುವವರಿಗೆ ಸೇರಿದ್ದಾಗಿದೆ ಎಂದು ಮೃತನ ಮಾವ ಚಿದಾನಂದ ನೀಡಿದ ದೂರಿನ ಮೇರೆಗೆ ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.