ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಂದರಗಿ ಗ್ರಾಮದಲ್ಲಿ ಮಳೆ ಅವಾಂತರಕ್ಕೆ ಹಾನಿಯಾದ ಬೆಳೆಗಳ ವೀಕ್ಷಣೆಯನ್ನು ಶುಕ್ರವಾರ ಸಾಯಂಕಾಲ 4ಗಂಟೆ ಸುಮಾರಿಗೆ ಜಿಲ್ಲಾಧಿಕಾರಿ ಆನಂದ್ ಕೆಮಾಡಿದರು. ಈ ಸಂದರ್ಭದಲ್ಲಿ ಮಳೆ ಅವಾಂತರಕ್ಕೆ ಹಾನಿಯಾದ ಮೆಕ್ಕೆಜೋಳ ತೊಗರಿ ಹಾಗೂ ಜೋಳದ ಬೆಳೆಗಳ ವೀಕ್ಷಣೆಯನ್ನು ಮಾಡಿ. ಮಳೆಯಿಂದ ಬೆಳೆ ಹಾನಿಯಾದ ರೈತರ ಗಳಿಗೆ ಸೂಕ್ತ ಪರಿಹಾರ ನೀಡುವ ಭರವಸೆಯನ್ನು ನೀಡಿದರು. ಅಧಿಕಾರಿಗಳು ಸಮಗ್ರ ರೀತಿಯಲ್ಲಿ ಬೆಳೆ ಹಾನಿಯನ್ನು ತಪಾಸನೆ ಮಾಡಿ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.