ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ತಾಂಡ ಗ್ರಾಮದಿಂದ ಮುಳುಕೊಪ್ಪ ಗ್ರಾಮದ ಕೋಡಿಬಸವೇಶ್ವರ ದೇವಸ್ಥಾನಕ್ಕೆ ತೇಳುವ ರಸ್ತೆಯ ನಕಾಶೆ ಕಂಡ ದಾರಿ ನಿರ್ಮಿಸಿ ಕೊಡುವಂತೆ ಗ್ರಾಮಸ್ಥರು ಶಿಕಾರಿಪುರ ದಲ್ಲಿ ಗುರುವಾರ ತಹಶೀಲ್ದಾರ್ ಗೆ ಮನವಿಯನ್ನು ಸಲ್ಲಿಸಿದ್ದಾರೆ.ಇನ್ನು ಶೀರಿಹಳ್ಳಿ ತಾಂಡಾದಿಂದ ಮುಳುಕೊಪ್ಪ ಹೋಗುವ ರಸ್ತೆಯ ವಿಚಾರದಲ್ಲಿ ಆ ಮಾರ್ಗದ ಕಚ್ಚಾ ರಸ್ತೆಯನ್ನು ಆ ಸರ ಹದ್ದಿನ ಜಮೀನಿನ ಹಕ್ಕುದಾರರು ಇದುವರೆಗೆ ಇದ್ದ ಕಚ್ಚಾ ರಸ್ತೆ ಸಂಪರ್ಕ ಕಡಿತಗೊಳಿಸಿದ್ದು, ಇದರಿಂದ ಆ ಮಾರ್ಗವಾಗಿ ನಮ್ಮ ಜಮೀನಿಗೆ ಹಾಗೂ ಮುಳುಕೊಪ್ಪ ಗ್ರಾಮಕ್ಕೆ ಮತ್ತು ಕೋಡಿಬಸವೇಶ್ವರ ದೇವಸ್ಥಾನಕ್ಕೆ ಸಂಚರಿಸುವವರಿಗೆ ತೊಂದರೆಯಾಗುತ್ತಿದೆ. ಕೂಡಲೇ ಸರ್ಕಾರದ ವತಿಯಿಂದ ರಚಿಸಿರುವ ನಕಾಶೆ ಕಂಡ ದಾರಿಯನ್ನ ನಿರ್ಮಿಸುವಂತೆ ಗ್ರಾಮಸ್ಥರ ಮನವಿ.