ನಗರದಲ್ಲಿ ಏರಟೆಲ್ ಸೀಮ್ ಸೇವೆ ಸ್ಥಗಿತ ಸಾರ್ವಜನಿಕರು ಆಕ್ರೋಶ. ನಗರದ ಕಾಲೇಜು ರಸ್ತೆಯಲ್ಲಿರುವ ಏರ್ ಟೆಲ್ ಕಚೇರಿಗೆ ಭಾನುವಾರ ನೂರಾರು ಗ್ರಾಹಕರು ದೌಡಾಯಿಸಿ, ಸೇವೆ ಸ್ಥಗಿತಗೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಸಿಮ್ ಕಾರ್ಡ್‌ಗಳು ಹ್ಯಾಕ್ ಆಗಿರಬಹುದೆಂದು ಆತಂಕಗೊಂಡ ಹಲವು ಏರಟೆಲ್ ಬಳಕೆದಾರರು, ಕಚೇರಿಯ ಸಿಬ್ಬಂದಿಯ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಏರ್ ಟೆಲ್ ಗ್ರಾಹಕರಿಗೆ ಮೊಬೈಲ್ ಕರೆಗಳಲ್ಲಿ ತೀವ್ರ ಸಮಸ್ಯೆಯಾಗಿತ್ತು. ಇದರಿಂದಾಗಿ, ಕಾಲೇಜು ರಸ್ತೆಯಲ್ಲಿರುವ ಏರ್ ಟೆಲ್ ಕಚೇರಿಗೆ ನೂರಾರು ಗ್ರಾಹಕರು ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು