6 ವರ್ಷದ ಅಪ್ರಾಪ್ತೆ ಮೇಲೆ 24 ವರ್ಷದ ಕಾಮುಕನಿಂದ ಅತ್ಯಾಚಾರ ಬಸವಕಲ್ಯಾಣ: ಮನೆಯಲ್ಲಿ ಆಟವಾಡುತಿದ್ದ 6 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಕಾಮುಕನೊಬ್ಬ ಅತ್ಯಾಚಾರ ಮಾಡಿದ ಘಟನೆ ತಾಲೂಕಿನ ಮುಡಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದ್ದು, ತಡವಾಗಿದೆ ತಿಳಿದು ಬಂದಿದೆ. ಕಳೆದ ಸೆ. 6ರಂದು ಬಾಲಕಿಗೆ ಮನೆಯಲ್ಲಿ ಬಿಟ್ಟು ಪಾಲಕರು ಜಮಿನಿಗೆ ತೆರಳಿದ ವೇಳೆ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ 24 ವರ್ಷದ ಈ ಕಾಮುಕ ಯುವಕ, ಸಂಜೆ ಸಮಯದಲ್ಲಿ ಬಾಲಕಿಗೆ ಪುಸುಲಾಯಿಸಿ ಮನೆಯಿಂದ ತನ್ನ ಮನೆಗೆ ಕರೆದುಕೊಂಡು ಹೋಗಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದ ಪಾಲಕರು, ಸೆ.9 ರಂದು ಮುಡಬಿ ಪೊಲೀಸ್ ಠಾಣೆಗೆ ಆಗಮಿಸಿ ದೂರು ಸಲ್ಲಿಸಿದ ನಂತರ