ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ 65 ಕೆ.ಜಿ ಗಾಂಜಾ ಸಾಗಾಟ ಮಾಡುತ್ತಿದ್ದ ಐಷರ್ ಲಾರಿ ಸಮೇತ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ. ಗಣೇಶ (38), ಪಿ. ಗೋಪಾಲ ರೆಡ್ಡಿ (43) ಬಂಧಿತ ಆರೋಪಿಗಳು. ಉಡುಪಿ ಜಿಲ್ಲೆಯಲ್ಲಿ ನಡೆದ ಅತ್ಯಂತ ದೊಡ್ಡ ಗಾಂಜಾ ಬೇಟೆ ಇದಾಗಿದೆ ಎಂದು ನಗರದಲ್ಲಿ ಎಸ್ಪಿ ಹರಿರಾಮ ಶಂಕರ್ ಮಾಹಿತಿಯನ್ನು ನೀಡಿದ್ದಾರೆ.