20 ದಿನಗಳಲ್ಲಿ 9 ಗೋವುಗಳನ್ನು ಕಳ್ಳತನ ಮಾಡಿರುವ ಘಟನೆ ಭದ್ರಾವತಿ ಪಟ್ಟಣದ ಜಿಂಕ್ ಲೈನ್ ನಲ್ಲಿ ನಡೆದಿದೆ.ಈ ಕುರಿತಾದ ಮಾಹಿತಿಯು ಗುರುವಾರ ಲಭ್ಯವಾಗಿದ್ದು, ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ಮೂರು ರೈತ ಕುಟುಂಬಕ್ಕೆ ಸೇರಿದ 9 ಗೋವುಗಳು ಕಾಣೆಯಾಗಿದೆ.ಈ ಕುರಿತಂತೆ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ದೇವರಾಜ್ ಅರಳಿಹಳ್ಳಿ ಆರೋಪಿಸಿದ್ದಾರೆ. ರಾತ್ರಿ ಇಡೀ ನಿದ್ದೆಗೆಟ್ಟು ಗೋವುಗಳನ್ನು ಕಾಯುವ ಪರಿಸ್ಥಿತಿ ರೈತರಿಗೆ ನಿರ್ಮಾಣವಾಗಿದ್ದು,ಲಕ್ಷಾಂತರ ರೂಪಾಯಿ ಮೌಲ್ಯದ ಗೋವುಗಳು ಸರಣಿ ಕಳ್ಳತನವಾಗುತ್ತಿದ್ದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತಾಗಿ ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ಕೂಡ ದಾಖಲಾಗಿದೆ.