ರಾಜ್ಯ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲೇನಹಳ್ಳಿ ರಮೇಶ್ ರವರ ನೇತೃತ್ವದಲ್ಲಿ ಶನಿವಾರ ನಮ್ಮ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಭಾಗ್ಯನಗರದ ಒಂದನೇ ವಾರ್ಡ್ ವ್ಯಾಪ್ತಿಯ ಪ್ರತಿ ಮನೆ ಮನೆಗೆ ತೆರಳಿ ಮತಪಟ್ಟಿಯನ್ನು ಪರಿಶೀಲಿಸಿದರು.ಈ ವೇಳೆ ಪುರಸಭಾ ಸದಸ್ಯ ಗಡ್ಡಂ ರಮೇಶ್ ರವರು ಮಾತನಾಡಿ, ಮತಗಳ್ಳತನದಿಂದ ಸಂವಿಧಾನದ ಆಶಯಕ್ಕೆ ಧಕ್ಕೆ ತರಲಾಗುತ್ತಿದೆ. ಹಾಗಾಗಿ ಯಾವುದೇ ಸರಕಾರ ಮತಗಳ್ಳತ ಮಾಡಬಾರದು ಎಂದರು.ಈ ವೇಳೆ ತಾಲೂಕು ಕಾಂಗ್ರೆಸ್ ಅಧ್ಯಕ್ಷ ನರೇಂದ್ರ,ಉಪಾಧ್ಯಕ್ಷ ಆಸೀಫ್ ,ವಕೀಲರದ ರಮಣ, ಶ್ರೀನಿವಾಸ್, ರಿಯಾಜ್, ಜಂಗೀರ್, ಚಂದ್ ಪಾಷ, ಚಿನ್ನಿ, ಸಾಯಿ,ಯುವ ಕಾಂಗ್ರೆಸ್ ಕಾರ್ಯಕರ್ತರು, ಉಪಸ್ಥಿತರಿದ್ದರು.