ದಾಂಡೇಲಿ : ದಾಂಡೇಲಿ - ಹಳಿಯಾಳ ರಾಜ್ಯ ಹೆದ್ದಾರಿಯಲ್ಲಿ ಬರುವ ಹಾಲಮಡ್ಡಿಯ ಹತ್ತಿರವಿರುವ ನಾಲಾದಲ್ಲಿ ಬಿದ್ದು ಮೃತಪಟ್ಟಿದ್ದ ಜನವನ್ನು ಮೊಸಳೆಗಳು ಎಳೆದಾಡಿ ತಿಂದು ತೇಗಿದ ಘಟನೆ ಇಂದು ಮಂಗಳವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ನಡೆದಿದೆ. ಕಾಳಿ ನದಿಗೆ ಸೇರುವ ಈ ನಾಲಾದಲ್ಲಿ ದನವೊಂದು ಬಿದ್ದು ಮೃತಪಟ್ಟಿತ್ತು. ಮೃತಪಟ್ಟ ದನವನ್ನು ಮೊಸಳೆಗಳ ಹಿಂಡೊಂದು ಎಳೆದಾಡಿ ತಿಂದು ತೇಗಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ.