ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಮರೇನಹಳ್ಳಿ ಗ್ರಾಮದ ಜಮೀನಿನಲ್ಲಿ ರೈತರೊಬ್ಬರ ಮೇಲೆ ಚಿರತೆ ದಾಳಿ ನಡೆಸಿದ್ದು, ಪ್ರಾಣಾಪಾಯದಿಂದ ಪಾರಾದ ಘಟನೆ ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ನಡೆದಿದೆ. ಜಮೀನಿನಲ್ಲಿ ಕೆಲಸ ನಿರತರಾಗಿದ್ದ ಹೊನ್ನೂರಪ್ಪ ಅವರ ವೇಳೆ ಚಿರತೆ ಹಿಂಬದಿಯಿಂದ ದಾಳಿ ನಡೆಸಿದ್ದು, ಹೊನ್ನೂರಪ್ಪ ಚಿರತೆಯಿಂದ ತಪ್ಪಿಸಿಕೊಂಡಿದ್ದಾರೆ. ನಂತರ ಚಿರತೆ ಪಕ್ಕದ ಜಮೀನಿಗೆ ಹೋಗಿದೆ. ಹೊನ್ನೂರಪ್ಪ ಕಾಲಿಗೆ ಚಿರತೆ ಕಚ್ಚಿದ ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದು, ಗಾಯಾಳು ಹೊನ್ನೂರಪ್ಪರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಣ್ಯ ಅಧಿಕಾರಿಗಳು ಚಿರತೆಗೆ ಬಲೆ ಬೀಸಿದ್ದಾರೆ.