ಕೊಪ್ಪಳ ಜಿಲ್ಲೆಯ ಐತಿಹಾಸಿಕ ಹಿನ್ನೆಲೆಯ ಗ್ರಾಮ ಕಿನ್ನಾಳ ಮತ್ತು ಸರ್ವಧರ್ಮ ಸಹಿಷ್ಣುತೆ ಗೆ ಇಂದು ಸಾಕ್ಷಿಯಾಗಿದೆ ಸೆಪ್ಟೆಂಬರ್ 05 ರಂದು ಮಧ್ಯಾಹ್ನ 12-30 ಗಂಟೆಗೆ ಕಿನ್ನಾಳ ಗ್ರಾಮದ ಹಿಂದು ಮಹಾಮಂಡಳಿ ಕಾಮನ ಕಟ್ಟೆ ಗೆಳೆಯರ ಬಳಗದವರು ಪ್ರತಿಷ್ಠಾಪಿಸಿದ ವಿಘ್ನೇಶ್ವರನ ಸ್ಥಳಕ್ಕೆ ಮಹಮ್ಮದ್ ಪೈಗಂಬರರ ಜನ್ಮ ದಿನಾಚರಣೆ ಮೇರವಣಿಗೆಯಲ್ಲಿ ಬಂದ ಮುಸ್ಲಿಂ ಬಾಂಧವರು ಗಣಪತಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ. ಹಿಂದು ಮಹಾಮಂಡಳಿ ಗಣಪತಿಯ ಗೆಳೆಯರು ಬಳಗದ ಸದಸ್ಯರು ಮುಸ್ಲಿಂ ಬಾಂದವರಿಗೆ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಗಮನ ಸೆಳದು ಶಾಂತಿ ಸೌಹಾರ್ದ ತೆಗೆ ಸಾಕ್ಷಿಯಾಗಿದ್ದಾರೆ