ಬುರುಡೆ ಗ್ಯಾಂಗ್ ನಿಂದ ಧರ್ಮಸ್ಥಳಕ್ಕೆ ಕಳಂಕ ಬಂದಿದೆ. ಸೆಪ್ಟೆಂಬರ್. 2ರಂದು ಗಂಗಾ ಮತ್ತು ತುಂಗಾ ನದಿಗಳ ನೀರನ್ನು ತೆಗೆದುಕೊಂಡು ಧರ್ಮಸ್ಥಳಕ್ಕೆ ತೆರಳುವುದಾಗಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಇ.ಕಾಂತೇಶ್ ತಿಳಿಸಿದ್ದಾರೆ ಶಿವಮೊಗ್ಗ ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಲಾಗಿದೆ ಎಂದು ಬುರುಡೆ ಗ್ಯಾಂಗ್ ಸುಳ್ಳು ಹೇಳುವ ಮೂಲಕ ಧರ್ಮಸ್ಥಳದ ಘನತೆಗೆ ಧಕ್ಕೆ ತಂದಿದೆ. ಆದ್ದರಿಂದ ಆ ಪವಿತ್ರ ಸ್ಥಳವನ್ನು ಶುದ್ಧೀಕರಿಸಲು ಸೆ.2ರಂದು ಬೆಳಗ್ಗೆ 8:00ಗೆ ತಮ್ಮ ಮನೆಯಿಂದ ನೂರಾರು ವಾಹನಗಳಲ್ಲಿ ಪ್ರಯಾಣ ಬೆಳೆಸುವುದಾಗಿ ಕೆ.ಇ.ಕಾಂತೇಶ್ ತಿಳಿಸಿದ್ದಾರೆ.