ದಾಂಡೇಲಿ : ಬರಲಿರುವ ಚೌತಿ ಹಬ್ಬ ಮತ್ತು ಈದ್‌ಮಿಲಾದ್ ಹಬ್ಬದ ನಿಮಿತ್ತವಾಗಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ಅಹಿತಕರ ಘಟನೆ ಸಂಭವಿಸದಂತೆ ಜನ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ದಾಂಡೇಲಿ ನಗರದಲ್ಲಿ ಇಂದು ಭಾನುವಾರ ಸಂಜೆ 5.30 ಗಂಟೆ ಸುಮಾರಿಗೆ ಪಥ ಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸೋಮಾನಿ ವೃತ್ತದಿಂದ ಆರಂಭಗೊಂಡ ಪಥ ಸಂಚಲನವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಪಥ ಸಂಚಲನದಲ್ಲಿ ಡಿವೈಎಸ್ಪಿ ಶಿವಾನಂದ ಮದರಕಂಡಿ, ಸಿಪಿಐ ಜೈಪಾಲ್ ಪಾಟೀಲ್, ಪಿಎಸ್ಐ ಗಳಾದ ಅಮೀನ್ ಅತ್ತಾರ್, ಕಿರಣ್ ಪಾಟೀಲ್, ಶಿವಾನಂದ ನಾಮದಗಿ, ಜಗದೀಶ್ ಹಾಗೂ ಪೊಲೀಸರು ಭಾಗವಹಿಸಿದ್ದರು.