ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದ ಕೆರೆಗೆ ಹಾರಿ ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. ಬೆಳಿಗಿನ ಜಾವ ವಾಯುವಿಹಾರಕ್ಕೆ ಬಂದ ಸ್ಥಳೀಯರ ಕೆರೆಯಲ್ಲಿ ಮೃತದೇಹ ಇರುವುದನ್ನು ಗಮನಿಸಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಸಾವಳಗಿ ಗ್ರಾಮದ ಅಂದಾಜು 45 ವಯಸ್ಸಿನ ಶೋಭಾ ಮಹಾದೇವ ಅಕ್ಕಿವಾಡ ಎಂದು ಗುರುತಿಸಲಾಗಿದೆ. ಮೃತ ಮಹಿಳೆ ಸಾವಳಗಿ ಗ್ರಾಮದಿಂದ ತನ್ನ ಸಂಬಂಧಿಕರ ಮನೆಯಲ್ಲಿ ಹಲವು ವರ್ಷಗಳಿಂದ ತನ್ನ ಮಗನ ಜೊತೆಗೆ ಕೊಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೆಂದು ತಿಳಿದುಬಂದಿದೆ.ಕೆಲವು ವರ್ಷಗಳಿಂದ ಯಾವುದೋ ಖಾಯಿಲೆಇಂದು ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.