ದಸರಾ ಹಾಗೂ ಆಯುಧ ಪೂಜೆ ಹಿನ್ನೆಲೆ ಹಾವೇರಿ ನಗರದ ವಿವಿಧೆಡೆ ಅಗತ್ಯ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿ ನಡೆಯಿತು. ನಗರದಲ್ಲಿ ಹೆಚ್ಚು ಜನಸಂದಣಿ ಸೇರುವ ಪ್ರದೇಶದಲ್ಲಿ ಮಾರಾಟ ಮಾಡಲಾಯಿತು. ಹೂವು, ಹಣ್ಣು, ಬಾಳೆ ಕಂಬ ಸೇರಿ ಅಗತ್ಯ ಸಾಮಗ್ರಿಗಳನ್ನು ಬೆಲೆ ಏರಿಕೆ ನಡುವೆಯೂ ಚೌಕಾಶಿ ಮಾಡಿ ಕರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬಂದವು.