ಆಹಾರ ಅರಸಿ ಬಂದ ಕಾಡಾನೆ ಕಬ್ಬಿನ ಗದ್ದೆಗೆ ಲಗ್ಗೆಯಿಟ್ಟ ಗುಂಡ್ಲುಪೇಟೆ ತಾಲ್ಲೂಕಿನ ಪರಮಾಪುರ-ಮೂಡಗೂರು ಮಧ್ಯೆ ಶನಿವಾರ ನಡೆದಿದೆ.ಪರಮಾಪುರದಿಂದ ಮೂಡಗೂರು ಮಾರ್ಗವಾಗಿ ಜಮೀನುಗಳ ಮೇಲೆ ತೆರಳಿರುವ ಒಂಟಿ ಸಲಗ ನಂದೀಶ್ ಎಂಬ ರೈತರ ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತಿದೆ. ವಿವಿಧ ಫಸಲುಗಳ ಜಮೀನಿನ ಮೂಲಕ ತೆರಳಿದ ಹಿನ್ನೆಲೆ ಬೆಳೆ ನಾಶವಾಗಿದ್ದು ಕಬ್ಬು ಕೂಡ ನೆಲಕಚ್ಚಿದೆ. ಕಾಡಾನೆ ಚಾಮರಾಜನಗರ ಅಥವಾ ಕುಂದಕೆರೆ ಅರಣ್ಯ ಪ್ರದೇಶದಿಂದ ಈ ಭಾಗಕ್ಕೆ ಬಂದಿದೆ ಎನ್ನಲಾಗುತ್ತಿದೆ. ಇದನ್ನು ಕಂಡ ರೈತರು ಆನೆ ನೋಡಲು ಜಮೀನುಗಳ ಬಳಿ ಜಮಾವಣೆಗೊಂಡು ಚೀರಾಡಿದ್ದಾರೆ.ಮಾಹಿತಿ ಅರಿತ ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಧಿಕಾರಿ ಶಿವಕುಮಾರ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.