ಕಲಬುರಗಿ : ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಅಪ್ರಚಾರ ಮತ್ತು ಷಡ್ಯಂತ್ರ ಖಂಡಿಸಿ ಕಲಬುರಗಿಯಲ್ಲಿ ನಗರ ಬಿಜೆಪಿ ಘಟಕ ಆಗಷ್ಟ್ 25 ರಂದು ಬೆಳಗ್ಗೆ 11.30 ಕ್ಕೆ ಬೃಹತ್ ಪ್ರತಿಭಟನೆ ನಡೆಸಿದೆ.. ನಗರದ ಸರ್ಧಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನ ಮೆರವಣಿಗೆ ನಡೆಸಿ, ಬಳಿಕ ಡಿಸಿ ಕಚೇರಿ ಬಳಿ ಹಿಂದೂ ವಿರೋಧಿ ಸರ್ಕಾರವೆಂದು ದಿಕ್ಕಾರ ಕೂಗಿ ಕೇಸರಿಪಡೆ ಆಕ್ರೋಶ ವ್ಯಕ್ತಪಡಿಸಿದೆ. ಇನ್ನೂ ಷಡ್ಯಂತ್ರ ನಡೆಸಿದ ಗ್ಯಾಂಗ್ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.