ಮಳವಳ್ಳಿ : ಕೆ.ಅರ್.ಎಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷರು ವೀರಶೈವ ಲಿಂಗಾಯತ ಸಮಾಜದ ಮುಖಂಡರಾಗಿದ್ದ ದುಗ್ಗನಹಳ್ಳಿ ಕೆ. ಮಹದೇವಪ್ಪ ಹೃದಯಾಘಾತದಿಂದ ನಿಧನರಾಗಿದ್ದಾರೆ. ಭಾನುವಾರ ಸಂಜೆ 4.30 ರ ಸಮಯದಲ್ಲಿ ಮಳವಳ್ಳಿ ಪಟ್ಟಣದ ಹೋಟೆಲ್ ವೊಂದರ ಬಳಿ ಟೀ ಕುಡಿಯುತ್ತ ಕುಳಿತಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದರೆಂದು ವರದಿಯಾಗಿದೆ. 68 ವರ್ಷ ವಯಸ್ಸಿನ ಮಹಾದೇ ವಪ್ಪ ವೀರಶೈವ ಲಿಂಗಾಯಿತ ಸಮಾಜ ಮುಖಂಡರಾಗಿ ಚಿರಪರಿಚಿತರಾಗಿದ್ದರು.