ಕಲಬುರಗಿ : ಧರ್ಮಸ್ಥಳದಲ್ಲಿ ನಡೆದಿರೋ ಅನೇಕ ನಿಗೂಢ ಕೊಲೆ, ಅತ್ಯಾಚಾರ ಪ್ರಕರಣಗಳ ತನಿಖೆಯನ್ನ ಎಸ್.ಐ.ಟಿ ಪಾರದರ್ಶಕವಾಗಿ ತನಿಖೆ ನಡೆಸುತ್ತಿದ್ದು, ಆದರೆ ತನಿಖೆಯಲ್ಲಿ ಯಾರು ಹಸ್ತಕ್ಷೇಪ ಮಾಡಲಾರದೆ ಅದರ ಪಾಡಿಗೆ ಅದಕ್ಕೆ ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಡಾ ಕೆ ಪ್ರಕಾಶ್ ಹೇಳಿದ್ದಾರೆ.. ಆ23 ರಂದು ಬೆಳಗ್ಗೆ 11.30 ಕ್ಕೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಎಸ್.ಐ.ಟಿ ತನಿಖೆ ಪಾರದರ್ಶಕವಾಗಿರಲಿ ಅಂತಾ ಸರ್ಕಾರ ತನಿಖಾ ತಂಡಕ್ಕೆ ಎಲ್ಲಾ ರೀತಿಯ ಅಧಿಕಾರ ನೀಡಿದೆ.. ಧರ್ಮಸ್ಥಳದಲ್ಲಿ ನಡೆದಿರೋ ಕೊಲೆ, ಅತ್ಯಾಚಾರ ಪ್ರಕರಣಗಳ ತನಿಖೆಗೆ ಅನೇಕರು ದೂರು ನೀಡಿದ್ದು, ಸರ್ಕಾರ ಯಾವ ಒತ್ತಡಕ್ಕೆ ಮಣಿಯದೇ ತನಿಖೆ ಮಾಡಬೇಕೆಂದು ಡಾ ಕೆ ಪ್ರಕಾಶ್ ಆಗ್ರಹಿಸಿದ್ದಾರೆ.