ಚಾಮರಾಜನಗರ ತಾಲೂಕಿನ ಇತಿಹಾಸಪ್ರಸಿದ್ದ ಹರದನಹಳ್ಳಿ ಗ್ರಾಮದ ದಿವ್ಯಲಿಂಗೇಶ್ವರ ದೇವಾಲಯದ ರಾಜಗೋಪುರ ನಿರ್ಮಾಣ ಕಾಮಗಾರಿಗೆ ಎಂಎಸ್‌ಐಎಲ್ ಅಧ್ಯಕ್ಷರು, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಶುಕ್ರವಾರ ದೇವಾಲಯದ ಆವರಣದಲ್ಲಿ ಗುದ್ದಲಿಪೂಜೆ ನೆರವೇರಿಸಿದರು. ನಂತರ ಅವರು ಮಾತನಾಡಿ, ಇತಿಹಾಸಪ್ರಸಿದ್ದ ಹರದನಹಳ್ಳಿ ಗ್ರಾಮದ ದಿವ್ಯಲಿಂಗೇಶ್ವರ ದೇವಾಲಯ ಚೋಳರ ಆಡಳಿತಾವಧಿಯಲ್ಲಿ ನಿರ್ಮಾಣವಾಗಿತ್ತು. ಕಳೆದ 15 ವರ್ಷಗಳ ಹಿಂದೆ ರಾಜಗೋಪುರ ಮಳೆಯ ಪರಿಣಾಮ ನೆಲಕ್ಕುರುಳಿತ್ತು. ರಾಜಗೋಪುರ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಹಿಂದೆ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದರು