ನೈಸ್ ಕಂಪನಿ ಕಾಮಗಾರಿ ನಡೆಸದಂತೆ ಸರ್ಕಾರದ ಕ್ರಮಕ್ಕೆ ಪ್ರಾಂತ ರೈತ ಸಂಘ ಒತ್ತಾಯ ಕೋಲಾರ: ರಾಜ್ಯ ಸರ್ಕಾರದ ವತಿಯಿಂದ ಬಿಎಂಐಸಿ ನೈಸ್ ಕಂಪನಿಗೆ ಯಾವುದೇ ರಸ್ತೆ ನಿರ್ಮಾಣ ಕಾಮಗಾರಿ ನಡೆಸದಂತೆ ನಿರ್ಬಂಧ ವಿಧಿಸಿ ಹಾಗೂ ಅಕ್ರಮ-ಕಾನೂನು ಬಾಹಿರ ರಸ್ತೆ ಕಾಮಗಾರಿ ವಿರುದ್ಧ ಪ್ರತಿಭಟಿಸುವ ರೈತರಿಗೆ ಹಾಗೂ ರೈತ ಮುಖಂಡರಿಗೆ ರಕ್ಷಣೆ ನೀಡಲು ಆಗ್ರಹಿಸಿ ನಗರದ ಉಪ ತಹಶಿಲ್ದಾರ್ ಅವರಿಗೆ ಶುಕ್ರವಾರ ಸಂಜೆ 4 ಗಂಟೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಮನವಿ ನೀಡಿ ಒತ್ತಾಯಿಸಿದರು.