ಪಟ್ಟಣದ ಧುಮ್ಮನಸೂರ್ ಸಮೀಪದಲ್ಲಿ ಇರುವಂತಹ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಭಾನುವಾರ ಮಧ್ಯಾಹ್ನ 1ಕ್ಕೆ ಶ್ರಾವಣ ಸಮಾಪ್ತಿ ಅಂಗವಾಗಿ ಮಾತೆಯರು ವಿಶೇಷ ಪೂಜೆಯನ್ನು ಸಲ್ಲಿಸಿದರು. ಈ ವೇಳೆ ಬೆಳಿಗ್ಗೆ ದೇವಿಗೆ ವಿಶೇಷ ಅಭಿಷೇಕ ಅಲಂಕಾರ ಪೂಜೆ ಬಳಿಕ ಮಹಾಮಂಗಳಾರತಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು. ದೇವಸ್ಥಾನ ವಿಶೇಷತೆ ಕುರಿತು ದೇವಸ್ಥಾನ ಸಮಿತಿ ಕಾರ್ಯದರ್ಶಿ ವಿನೋದ್ ಜಾಜಿ ಅವರು ವಿವರಿಸಿದರು. ಅಧ್ಯಕ್ಷ ವೀರೇಶ ಎಂ ಮತ್ತಿತರರಿದ್ದರು.