ನಮಸ್ತೇ ಸದಾ ವತ್ಸಲೇ ಮಾತೃಭೂಮಿ" ಎಂಬ ಆರ್‌ಎಸ್‌ಎಸ್ ಗೀತೆಯನ್ನು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ವಿಧಾನಸಭೆಯಲ್ಲಿ ಹಾಡಿದ್ದಾರೆ ಅವರು ಎನ್ ಬೇಕಾದರೂ ಮಾಡಬಹುದು ಅವರನ್ನ ಯಾರ್ ಪ್ರಶ್ನೆ ಮಾಡ್ತಾರೆ ಎಂದು ಮಾಜಿ ಸಚಿವ ಕೆ. ಎನ್. ರಾಜಣ್ಣ ಪ್ರತಿಕ್ರಿಯೆ ನೀಡಿದರು.ಅವರು ತುಮಕೂರು ನಗರದ ಡಿಸಿಸಿ ಬ್ಯಾಂಕ್ ಸಮೀಪ ಭಾನುವಾರ ಮಧ್ಯಾಹ್ನ 12.45 ರ ಸಮಯದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.ಇಷ್ಟೇ ಅಲ್ಲ ಡಿ. ಕೆ. ಶಿವಕುಮಾರ್ ಪ್ರಯಾಗ್ ರಾಜ್ ಹೋಗುತ್ತಾರೆ, ಪುಣ್ಯ ಸ್ನಾನ ಮಾಡ್ತಾರೆ, ಅಮಿತ್ ಶಾ ಜೊತೆ ವೇದಿಕೆಯಲ್ಲಿ ಕೂರುತ್ತಾರೆ, ರಾಹುಲ್ ಗಾಂಧಿಗೆ ಬೇಡದ ಅಂಬಾನಿ ಮಗನ ಮದುವೆಗೆ ಕುಟುಂಬ ಸಮೇತ ಹೋಗ್ತಾರೆ,ಆರ್ ಎಸ್ ಎಸ್ ಗೀತೆನೂ ಹಾಡ್ತಾರೆ ಎನ್ ಬೇಕಾದರೂ ಮಾಡ್ತಾರೆ ಎಂದರು.