ಚಿಕ್ಕಮಗಳೂರು: ಪುನುಗು ಬೆಕ್ಕನ್ನು ಶಿಖಾರಿ ಮಾಡಿ ಸ್ವಚ್ಛಗೊಳಿಸುವಾಗ ಅರಣ್ಯ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ಅರಣ್ಯ ವ್ಯಾಪ್ತಿಗೆ ಒಳಪಡುವ ಉದ್ದೇಬೋರನಹಳ್ಳಿ ಸಮೀಪದ ಪಾದಮನೆ ಗ್ರಾಮದ ಮನೆಯೊಂದರಲ್ಲಿ ಪುನುಗು ಬೆಕ್ಕನ್ನು ಸ್ವಚ್ಛಗೊಳಿಸುತ್ತಿದ್ದ ಬೇಲೂರು ತಾಲೂಕು ಹಲ್ಮಿಡಿ ಗ್ರಾಮದ ರವಿ ಎಂಬ ಆರೋಪಿಯನ್ನು ವಶಕ್ಕೆ ಪಡೆದು ಆತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಶುಕ್ರವಾರ 12ಗಂಟೆ ಸುಮಾರಿಗೆ ಒಪ್ಪಿಸಲಾಗಿದೆ. ಈ ಪುನುಗು ಬೆಕ್ಕುಗಳು ಅಳಿವಿನಂಚಿನಲ್ಲಿರುವ ಪ್ರಬೇಧವಾಗಿದ್ದು ಅಪರೂಪದ ಪ್ರಾಣಿ ಎಂದು ಪರಿಗಣಿಸಲಾಗಿದೆ. ಈ ಬೆಕ್ಕುಗಳು ಮಲೆನಾಡಿನ ಕಾಫಿ ತೋಟಗಳಲ್ಲಿ ಸಾಮಾನ್ಯವಾಗಿ ವಾಸಿಸು