ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಧಾನಸೌಧದಲ್ಲಿ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ಯಾರೇ ಧರ್ಮ ಪ್ರಚಾರಕರು ಟೂರಿಸ್ಟ್ ವೀಸಾದಡಿ ಬಂದು ಧರ್ಮ ಪ್ರಚಾರ ಮಾಡುವಂತಿಲ್ಲ. ಸಿದ್ದರಾಮಯ್ಯ ಇದಕ್ಕೆ ಅನುಮತಿ ಕೊಟ್ಟಿದ್ದನ್ನು ನಾನು ಪ್ರಶ್ನೆ ಮಾಡಿದ್ದೆ. ಕರ್ನಾಟಕವನ್ನು ಮುಸ್ಲಿಂ ಎಕ್ಸ್‌ಪೆರಿಮೆಂಟ್ ರಾಜ್ಯವಾಗಿ ಮಾಡ್ತಿದ್ದಾರೆ, ಇದು ಸರಿಯಲ್ಲ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತೆ ಎಂದು ಕಿಡಿಕಾರಿದರು.