ಗಡಿಭಾಗದಲ್ಲಿರುವ ಗ್ರಾಮಗಳಲ್ಲಿನ ರೈತರು ಕೃಷಿ ಜೊತೆಗೆ ಹೈನುಗಾರಿಕೆಯಲ್ಲಿ ಹೆಚ್ಚಾಗಿ ತೊಡಗಿರುವ ಉದ್ದೇಶದಿಂದ ಇವರ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪಶು ಚಿಕಿತ್ಸಾಲಯವನ್ನು ಪ್ರಾರಂಭಿಸಿದ್ದು ಇದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಎಸ್ಎನ್ ನಾರಾಯಣಸ್ವಾಮಿ ತಿಳಿಸಿದರು.ಬೂದಿಕೋಟೆ ಹೋಬಳಿಯ ಗುಲ್ಲಹಳ್ಳಿ ಗ್ರಾಮದಲ್ಲಿ ಶನಿವಾರ ನೂತನ ಪಶು ಚಿಕಿತ್ಸಾಲಯವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ,ಕೋಲಾರ ಜಿಲ್ಲೆಗೆ ಒಂದೇ ಒಂದು ಪಶು ಚಿಕಿತ್ಸಾಲಯವನ್ನು ಮಂಜೂರು ಮಾಡಿದ್ದು ಅದು ಗುಲ್ಲಹಳ್ಳಿ ಗ್ರಾಮಕ್ಕೆ ಮಂಜೂರು ಆಗಿರುವುದು ಸಂತಸದ ವಿಷಯವಾಗಿದೆ.ಪಶು ಚಿಕಿತ್ಸಾಲಯವಿದ್ದರೆ ಜಾನುವಾರುಗಳಿಗೆ ಏನಾದರೂ ತೊಂದರೆಯಾದಾಗ ಹಾಗೂ ಅನಾರೋಗ್ಯವನ್ನು ನಿರ್ವಾರಣೆ ಮಾಡಲು ಸಾಧ್ಯ ಎಂದರು