ಮನೆಯ ಮುಂದೆ ನಿಲ್ಲಿಸಿದ್ದಂತ ಸ್ಕೂಟರ್ ಅನ್ನ ಕಳ್ಳರು ಕಳತನ ಮಾಡಿರುವ ಘಟನೆ ನಡೆದಿದೆ . ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯ ಕಂಚುಗಾರನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಲೋಕೇಶ್ ಅವರಿಗೆ ಸೇರಿದಂತಹ ಹೋಂಡಾ ಡಿಯೋ ಸ್ಕೂಟರ್ ಅನ್ಬ ಕಳವು ಮಾಡಿದ್ದಾರೆ. ಲೋಕೇಶ್ ಕೆಲಸ ಮುಗಿಸಿ ಬಂದು ಮನೆಯ ಮುಂದೆ ಸ್ಕೂಟರ್ ಅನ್ನ ನಿಲ್ಲಿಸಿದ್ದರು. ಬೆಳಿಗ್ಗೆ ಎದ್ದು ನೋಡಿದರೆ ಸ್ಕೂಟರ್ ಕಾಣಲಿಲ್ಲ. ಎಲ್ಲಾ ಕಡೆ ಹುಡುಕಾಟ ಮಾಡಿದರು ಎಲ್ಲಿಯು ಪತ್ತೆ ಆಗದ ಹಿನ್ನೆಲೆಯಲ್ಲಿ ಶನಿವಾರ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.