ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಕಾಟ ಮಿತಿಮೀರಿದ್ದು, ಮನೆಯ ಬಾಗಿಲಲ್ಲೇ ಕಾಡಾನೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಮನೆಯನ್ನು ಬಿಟ್ಟು ಇನ್ನೆಲ್ಲಿಗೆ ಹೋಗುವುದು ಎಂಬ ಪರಿಸ್ಥಿತಿಗೆ ಮಲೆನಾಡಿಗರು ಬಂದಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಕಡಬಗೆರೆ ಸಮೀಪ ನಿತಿನ್ ಸಾಲ್ದಾನ್ ಎಂಬುವರ ತೋಟದ ಮನೆಯ ಬಳಿಯ ಕಾಡಾನೆ ಕಾಣಿಸಿಕೊಂಡಿದ್ದು ಜನರು ಆತಂಕದಲ್ಲಿ ಜೀವನ ಮಾಡುವಂತಾಗಿದೆ.