ಆಹಾರ ಅರಸಿ ರಸ್ತೆಗಿಳಿಯುವ ಕಾಡಾನೆ ಉಪಟಳ ಮುಂದುವರೆದಿದ್ದು ಬೆಳ್ಳಂಬೆಳಗ್ಗೆ ಆಹಾರ ಅರಸಿ ರಸ್ತೆಗಿಳಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಶುಕ್ರವಾರ ನಡೆದಿದೆ. ಕಾಡಾನೆ ಬರುತ್ತಿದ್ದಂತೆ ಭಯದಿಂದ ಪ್ರವಾಸಿಗರು ಚೀರಿಕೊಂಡಿದ್ದು ವೀಡಿಯೋದಲ್ಲಿ ಸೆರೆಯಾಗಿದೆ. ಕೆಲ ತಿಂಗಳಿನಿಂದ ತರಕಾರಿ ಸಾಗಿಸುವ ವಾಹನಗಳ ಈ ಒಂಟಿ ಸಲಗ ದಾಳಿ ಮಾಡುತ್ತಿದ್ದು ಬಂಡೀಪುರದಿಂದ ಊಟಿಗೆ ತೆರಳಲು ಜೀವ ಕೈಯಲ್ಲಿ ಹಿಡಿದು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.