ಜ್ಯುವೆಲರಿ ಅಂಗಡಿ ಮಾಲೀಕನಿಂದ ಕಳವು ಮಾಲು ವಶ ಕಳುವಾಗಿದ್ದ ಮಾಲನ್ನು ಜ್ಯುವೆಲರಿ ಅಂಗಡಿ ಮಾಲೀಕನಿಂದ ಪೊಲೀಸರು ವಶಪಡಿಸಿಕೊಂಡಿದ್ದು ಕಳ್ಳತನಕ್ಕೆ ಮುಂದಾಗಿದ್ದ ಇಬ್ಬರು ಕಳ್ಳರನ್ನು ಪೊಲೀಸರು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ. ಶ್ರೀನಿವಾಸಪುರ ತಾಲ್ಲೂಕಿನ ಕೊಳ್ಳೂರು ಗ್ರಾಮದ ಶ್ರೀನಾಥ್ ಬಿನ್ ಯಲ್ಲಪ್ಪ ಎಂಬುವವರ ಮನೆಯಲ್ಲಿ ಇದೇ ಗ್ರಾಮದ ಶಿವ ಮತ್ತು ಚಿಕ್ಕನಹಳ್ಳಿ ಗ್ರಾಮದ ಕಿರಣ್ ಕುಮಾರ್ ಎಂಬ ಇಬ್ಬರು ಸೋಮವಾರ ಮನೆಯಲ್ಲಿದ್ದ 38 ಗ್ರಾಂ ನ ಚಿನ್ನದ ಚೈನ್ ಓಲೆ ಹಾಗೂ 8 ಸಾವಿರ ನಗದು ಹಣವನ್ನು ದೋಚಿದ್ದಾರೆ. ಈ ಹಿನ್ನೆಲೆ ದೂರು ಸ್ವೀಕರಿಸಿದ ಶ್ರೀನಿವಾಸಪುರ ಪೊಲೀಸರು ಮೇಲ್ಕಂಡ ಇಬ್ಬರು ಆರೋಪಿ