ನಗರದ ತಮ್ಮಕಚೇರಿಯಲ್ಲಿ ಬುಧವಾರ ಮಾದ್ಯಮಗಳಿಗೆ ಪ್ರತಿಕ್ರಯಿಸಿದ ಎಸ್ಪಿ ನಿಖಿಲ್ ರವರು ಜಿಲೇಟಿನ್ ಕಡ್ಡಿಗಳನ್ನು ಬಳಸಿ ಕಲ್ಲುಬಂಡೆಯನ್ನು ಸ್ಫೋಟ ಮಾಡುವ ವೇಳೆ ಬ್ರಹತ್ ಬಂಡೆಕಲ್ಲು ಕುಸಿತವಾಗಿದೆ ಅಲ್ಲೇ ಪಕ್ಕದಲ್ಲೇ ನಿಂತಿದ್ದ ಕಲ್ಲು ಕುಟಿಗ ಮಂಜುನಾಥ್ ಮೇಲೆ ಬಿದ್ದು ಸಾವನಪ್ಪಿದ್ದಾನೆ.ಮಂಜುನಾಥ್ ಜೊತೆಯಲ್ಲಿ ಮತ್ತೊಬ್ಬ ಆಂಧ್ರ ಮೂಲದ ಕಾರ್ಮಿಕ ನವೀನ್ ಅನ್ನೋರಿಗೆ ಗಂಭೀರ ಗಾಯಗಳಾಗಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.ಹುಣಸಿಕೋಟೆ ಗ್ರಾಮದ ಅಂಜಿನಪ್ಪ ಅನ್ನೋ ವ್ಯಕ್ತಿ ಕಲ್ಲು ವ್ಯಾಪಾರ ಮಾಡ್ತಿದ್ದು,ಆತನೇ ಇವರನ್ನು ಕರೆದುಕೊಂಡು ಹೋಗಿದ್ದ.ಕಲ್ಲು ಬ್ಲಾಸ್ಟಿಂಗ್ ವೇಳೆ ಮಳೆ ಸಹ ಬರ್ತಿತ್ತು,ಇದರ ಯಾವುದೇ ಸುರಕ್ಷತಾ ಕ್ರಮಗಳನ್ನು ಕಾರ್ಮಿಕರಿಗೆ ಅಂಜಿನಪ್ಪ ನೀಡದೆ ಇರುವ ಪರಿಣಾಮ ಈ ಅವಘಡ ಸಂಭವಿಸಿದೆ ಎಂದರು