ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಹೋರಾಡಿ ಹರಿಜನ್ ಅವತಾರ ಹಾಗೂ ಗ್ರಾಮೋದ್ಧಾರಕ್ಕಾಗಿ ನೀಡಿರುವಂತಹ ಗುರುರು ರಾಮಸ್ವಾಮಿ ಅಯ್ಯಂಗಾರ್ ನೀಡಿದ ಕೊಡುಗೆ ಅವಿಸ್ಮರಣೀಯ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಅಶೋಕ ರಾಜೋಳೆ ಅಭಿಪ್ರಾಯಪಟ್ಟರು. ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮಂಗಳವಾರ ಮದ್ಯಾಹ್ನ 2:30ಕ್ಕೆ ಏರ್ಪಡಿಸಿದ್ದ ಗೋ. ರಾ. ಅ. ಬದುಕು ಬರಹ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.