ಕಲಬುರಗಿ : ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಮ್ ಬ್ಯಾನ್ ಮಾಡಿ ಬ್ಯಾಲೇಟ್ ಪೇಪರ್ ಬಳಸಲು ನಿರ್ಧರಿಸಿರೋ ಸರ್ಕಾರದ ಕ್ರಮವನ್ನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಮರ್ಥನೆ ಮಾಡಿಕೊಂಡಿದ್ದಾರೆ.. ಸೆ6 ರಂದು ಮಧ್ಯಾನ 1 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಮುಂದುವರಿದ ಅಮೇರಿಕಾ, ಇಂಗ್ಲೆಂಡ್, ಫ್ರಾನ್ಸ್ ದೇಶಗಳಲ್ಲೆ ಇವಿಎಮ್ ಉಪಯೋಗಿಸ್ತಿಲ್ಲ.. ನಮ್ಮಲ್ಲಿ ರಾಜೀವಗಾಂಧಿ ಸರ್ಕಾರದ ಅವಧಿಯಲ್ಲಿ ಇವಿಎಮ್ ತೀರ್ಮಾನ ಕೈಗೊಂಡಿದ್ದು ನಿಜ.. ಆದರೆ ಇತ್ತೀಚಿಗೆ ಇದರಲ್ಲಿ ಮೋಸ ಆಗ್ತಿರೋ ಡೌಟ್ ಬರ್ತಿದ್ದು, ಮುಂದುವರಿದ ದೇಶಗಳೆ ಇವಿಎಮ್ ಬಳಸದೇ ಇರೋವಾಗ ನಾವ್ಯಾಕೇ ಬಳಸಬೇಕೆಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.