ನ್ಯಾಯಮೂರ್ತಿ ಡಾ.ನಾಗಮೋಹನದಾಸ ಅವರ ಒಳಮೀಸಲಾತಿ ವರದಿಯನ್ನ ಜಾರಿಗೊಳಿಸಿರುವುದನ್ನ ತಡೆಹಿಡಿಯುವುದು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಾಗಲಕೋಟೆ ನಗರದಲ್ಲಿಂದು ಬಂಜಾರಾ ಸಮಾಜದ ಬಾಂಧವರು ಪ್ರತಿಭಟನೆ ನಡೆಸಿದರು.ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಡಾ.ನಾಗಮೋಹನದಾಸ ಅವರ ಒಳಮೀಸಲಾತಿ ವರದಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು. ಬಂಜಾರಾ ಸಮಾಜದ ಶ್ರೀಗಳು ಹಾಗೂ ಮುಖಂಡ ಹೂವಪ್ಪ ರಾಠೋಡ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಜರುಗಿತು.