ಯಲ್ಲಾಪುರ, ನವರಾತ್ರಿಯ ಅಂಗವಾಗಿ ಶ್ರೀ ಗ್ರಾಮದೇವಿ ದೇವಾಲಯದಲ್ಲಿವಿಶೇಷ ಪೂಜೆ ಅನ್ನಸಂತರ್ಪಣಾ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅವರು ಸ್ವತಃ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಾಧಿಗಳಿಗೆ ಅನ್ನಪ್ರಸಾದ ವಿತರಿಸಿದರು. ಜನರೊಂದಿಗೆ ಬೆರೆತು ಸೇವೆ ಸಲ್ಲಿಸಿದ ಅವರ ಸರಳತೆ ಭಕ್ತರ ಪ್ರಶಂಸೆ ಪಾತ್ರವಾಗಿದೆ. ,ಅ 2 ವಿಜಯದಶಮಿಯವರೆಗೆ ವಿಶೇಷ ಪೂಜೆ ನಡೆಯಲಿವೆ. ಪ್ರತಿದಿನ ರಾತ್ರಿ 8.30 ರಿಂದ ಶಿರಸಿಯ ವಿದ್ವಾನ್ ನಾರಾಯಣದಾಸ ಅವರಿಂದ ಹರಿಕೀರ್ತನೆ ಕಾರ್ಯಕ್ರಮ ನಡೆಯಲಿವೆ. ನವರಾತ್ರಿ ಪ್ರಯುಕ್ತ ಶ್ರೀದೇವಿಯರಿಗೆ ಆಭರಣ ತೊಡಿಸಿ ಸರ್ವಾಲಂಕಾರ ಮಾಡಲಾಗಿದೆ. ದೇವಸ್ಥಾನವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದೆ.