ಜಾಲಹಳ್ಳಿ ಪೊಲೀಸರಿಂದ 41 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ. ಗೊರಗುಂಟೆಪಾಳ್ಯ ಬ್ರಿಡ್ಜ್ ಕೆಳಗೆ ಇಬ್ಬರು ಗಾಂಜಾ ಮಾರಾಟ ಮಾಡ್ತಿದ್ದರು. ಈ ವೇಳೆ ದಾಳಿ ಮಾಡಿದ ಜಾಲಹಳ್ಳಿ ಪೊಲೀಸರು ಇಬ್ಬರು ಆರೋಪಿಗಳಿಂದ, 41 ಕೆ.ಜಿ. 300 ಗ್ರಾಂ ಗಾಂಜಾ ಜಪ್ತಿ ಮಾಡಿ ಇಬ್ಬರು ಆರೋಪಿಗಳನ್ನ ಬಂಧಸಿ, ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪರಿಶೀಲನೆ ಮಾಡಲಾಯ್ತು. ಬಂಧಿತ ಆರೋಪಿಗಳು ಒರಿಸ್ಸಾದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿದ್ರು. ರೈಲಿನ ಮೂಲಕ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದರು. NDPS ಆಕ್ಟ್ ಅಡಿಕೇಸ್ ದಾಖಲಿಸಿ ಆರೋಪಿಗಳ ಬಂಧನ ಮಾಡಲಾಗಿದೆ.