ರಾಜ್ಯ ಸರ್ಕಾರ ಎಸ್'ಐಟಿ ರಚಿಸಿ ಧರ್ಮಸ್ಥಳದ ಕಳಂಕ ತೆಗೆದಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು. ಅವರು ಭಾನುವಾರ ಕೌಡ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸೌಜನ್ಯ ಹೆಸರಿನಲ್ಲಿ ಧರ್ಮಸ್ಥಳದ ಹೆಸರು ಕೆಡಿಸಲು ಕೆಲ ಕಿಡಿಗೇಡಿಗಳು ಮುಂದಾಗಿದ್ದರು ಎಂದು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ ಎಂದರು. ಇದನ್ನು ತಿಳಿದ ನಮ್ಮ ಸರ್ಕಾರ ಎಸ್‌ಐಟಿ ರಚಿಸಿ ಇದೆಲ್ಲದರ ಬಗ್ಗೆ ತೀರ್ಪು ನೀಡಿದೆ. ಇದೀಗ ಎಸ್‌ಐಟಿ ತನಿಖೆಯಿಂದ ಧರ್ಮಸ್ಥಳದ ಮೇಲಿನ ಕಳಂಕ ನಿವಾರಣೆಯಾಗಿದೆ ಎಂದರು. ಈಗ ಯಾರೂ ಇಂತಹ ಅಪಪ್ರಚಾರ ಮಾಡುವುದಿಲ್ಲ. ಆದರೆ ಬಿಜೆಪಿ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಅವರಿಗೆ ಗೌರವವಿದ್ದರೆ ನಮ್ಮ ಸರ್ಕಾರವನ್ನು ಅಭಿನಂದಿಸಲೇಬೇಕು ಎಂದು ಟೀಕಿಸಿದರು.